ತಾನೆ ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನೆಂಬ
ಆರು ಸ್ಥಲವ ಮೀರಿದ ಅಖಂಡನಿರ್ವಯಲು ನೋಡಾ.
ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗ ಮೊದಲಾಗಿ
ಆಚಾರಾದಿ ಮಹಾಲಿಂಗ ಕಡೆಯಾಗಿ
ನವನಾದಬ್ರಹ್ಮಲಿಂಗವ ಮೀರಿದ
ಮಹಾಘನಲಿಂಗೈಕ್ಯ ತಾನಲ್ಲದೆ ಮತ್ತಾರುಂಟು ಹೇಳಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Tāne bhakta mahēśvara prasādi prāṇaliṅgi śaraṇa aikyanemba
āru sthalava mīrida akhaṇḍanirvayalu nōḍā.
Iṣṭaliṅga prāṇaliṅga bhāvaliṅga modalāgi
ācārādi mahāliṅga kaḍeyāgi
navanādabrahmaliṅgava mīrida
mahāghanaliṅgaikya tānallade mattāruṇṭu hēḷā
apramāṇakūḍalasaṅgamadēvā