Index   ವಚನ - 595    Search  
 
ಇಡಾ ಪಿಂಗಳ ಸುಷುಮ್ನ ಗಾಂಧಾರಿ ಹಸ್ತಿ ಜಿಂಹ್ವೆ ಪೂಷ ಪಯಶ್ಚಿನಿ ಲಕುಹ ಅಲಂಬು ಶಂಕಿನಿಯೆಂಬ ದಶನಾಳಂಗಳು ತಾನಿರ್ದಲ್ಲಿ. ಇಡಾ ಪಿಂಗಳ ಸುಷುಮ್ನನಾಳ ಮೊದಲಾದ ದಶನಾಳಂಗಳೊಳಾಡುವ ವಾಯು ಪ್ರಾಣ ಅಪಾನ ವ್ಯಾನ ಉದಾನ ಸಮಾನ ನಾಗ ಕೂರ್ಮ ಕ್ರಕರ ದೇವದತ್ತ ಧನಂಜಯನೆಂಬ ದಶವಾಯುಗಳು ತಾನಿರ್ದಲ್ಲಿ. ಅಗ್ನಿಮಂಡಲ ಆದಿತ್ಯಮಂಡಲ ಚಂದ್ರಮಂಡಲವೆಂಬ ಮಂಡಲತ್ರಯಂಗಳು ತಾನಿರ್ದಲ್ಲಿ. ತಾನೆ ಯಂತ್ರವಾಹಕನಾಗಿ ಇವೆಲ್ಲವ ತನ್ನ ಲೀಲಾವಿಲಾಸ ಸೂತ್ರಮಾತ್ರದಲ್ಲಿಯೇ ಆಡಿಸುತ್ತಿಹನಲ್ಲದೆ ತಾನಾಡನು ತಾ ನೋಡನು ನೋಡಾ ನಮ್ಮ ಅಪ್ರಮಾಣಕೂಡಲಸಂಗಮದೇವ.