Index   ವಚನ - 596    Search  
 
ಇಡೆಯಲ್ಲಿ ಸುಳಿವ ವಾಯುವ ಸ್ವೀಕರಿಸಿ ನಿಜವನರಿಯದೆ ಕೆಟ್ಟವರು ಕೋಟಾನುಕೋಟಿ. ಪಿಂಗಳೆಯಲ್ಲಿ ಸುಳಿವ ವಾಯುವ ಸ್ವೀಕರಿಸಿ ನಿಜವನರಿಯದೆ ಕೆಟ್ಟವರು ಕೋಟಾನುಕೋಟಿ. ಸುಷಮ್ನನಾಳದಲ್ಲಿ ಸುಳಿವ ವಾಯುವ ಸ್ವೀಕರಿಸಿ ನಿಜವನರಿಯದೆ ಕೆಟ್ಟವರು ಕೋಟಾನುಕೋಟಿ. ಅಲ್ಲಿಂದತ್ತತ್ತಲಾದ ಮಹಾಘನಲಿಂಗವನರಿಯದೆ ಕೆಟ್ಟವರು ಕೋಟಾನುಕೋಟಿ. ಅಪ್ರಮಾಣಕೂಡಲಸಂಗಮದೇವಯ್ಯನ ನಿಲವ ತಾನೆಂದರಿಯದೆ ಕೆಟ್ಟ ವೇಷಡಂಭಕರ ನಾನೇನೆಂಬೆನಯ್ಯಾ?