ಆದಿ ಮಕಾರಪ್ರಣವ, ಆದಿ ಅಕಾರಪ್ರಣವ,
ಆದಿ ಉಕಾರಪ್ರಣವ
-ಈ ಮೂರು ಬೀಜಾಕ್ಷರ.
ಆದಿ ಮಕಾರಪ್ರಣವವೆ ಆದಿಕಲೆ,
ಆದಿ ಅಕಾರಪ್ರಣವವೆ ಆದಿನಾದ,
ಆದಿ ಉಕಾರಪ್ರಣವವೆ ಆದಿಬಿಂದು
ಆದಿ ಮಕಾರಪ್ರಣವವೇ ಸರ್ವಾತ್ಮನು.
ಆದಿ ಅಕಾರಪ್ರಣವವೇ ಪರಮಾತ್ಮನು.
ಆದಿ ಉಕಾರಪ್ರಣವವೇ ಶಿವಾತ್ಮನು ನೋಡಾ.
ಇದಕ್ಕೆ ಈಶ್ವರೋsವಾಚ:
ಅಕಾರಂ ಪರಾತ್ಪರಾತ್ಮಂ ಉಕಾರಂ ಶಿವಾತ್ಮೋ ಭವೇತ್ |
ಮಕಾರಂ ಸರ್ವಾತ್ಮೈವ ಇತಿ ಭೇದಂ ವರಾನನೇ ||''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.