Index   ವಚನ - 646    Search  
 
ಆ ಪರತತ್ತ್ವದ ಪೃಥ್ವಿಯ ಮೇಲೆ ನಿರಂಜನ ಆಧಾರಚಕ್ರ. ಅಲ್ಲಿಯ ಪದ್ಮ ಐನೂರುನಾಲ್ವತ್ತುದಳದಪದ್ಮ. ಆ ಪದ್ಮದ ವರ್ಣ ಅರವತ್ತುಸಾವಿರದಾರುನೂರು ಕೋಟಿ ಸೂರ್ಯಚಂದ್ರಾಗ್ನಿಪ್ರಕಾಶದ ವರ್ಣ. ಅಲ್ಲಿಯ ಅಕ್ಷರ ಐನೂರು ನಾಲ್ವತ್ತಕ್ಷರ; ಆ ಅಕ್ಷರ ವಾಚಾತೀತವಾಗಿಹುದು. ಅಲ್ಲಿಯ ಶಕ್ತಿ, ನಿಃಕಲಶಕ್ತಿ, ಅಲ್ಲಿಯ ನಾದ ಚಿನ್ನಾದ. ಅಚಲ ಬ್ರಹ್ಮವೆ ಅಧಿದೇವತೆ. ಅಲ್ಲಿಯ ಬೀಜಾಕ್ಷರ ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವ ನೋಡಾ. ಅಪ್ರಮಾಣಕೂಡಲಸಂಗಮದೇವಾ.