ಪರತತ್ತ್ವದ ತೇಜದ ಮೇಲೆ ನಿರಂಜನ ಮಣಿಪೂರಕಚಕ್ರ.
ಅಲ್ಲಿಯ ಪದ್ಮ ಮೂರುನೂರರುವತ್ತುದಳದಪದ್ಮ.
ಆ ಪದ್ಮದ ವರ್ಣ ಎಂಬತ್ತುಸಾವಿರದಾರುನೂರುಕೋಟಿ
ಸೂರ್ಯಚಂದ್ರಾಗ್ನಿ ಪ್ರಕಾಶದ ವರ್ಣ.
ಅಲ್ಲಿಯ ಅಕ್ಷರ ಮೂರುನೂರರುವತ್ತಕ್ಷರ;
ಆ ಅಕ್ಷರ ವರ್ಣಾತೀತವಾಗಿಹುದು.
ಅಲ್ಲಿಯ ಶಕ್ತಿ ನಿತ್ಯಾನಂದಶಕ್ತಿ; ವಿಮಲಬ್ರಹ್ಮವೆ ಅಧಿದೇವತೆ.
ಅಲ್ಲಿಯ ನಾದ ಅಮಲಾನಂದವೆಂಬ ಮಹಾನಾದ.
ಅಲ್ಲಿಯ ಬೀಜಾಕ್ಷರ ಅಖಂಡಮಹಾಜ್ಯೋತಿಪ್ರಣಮ ನೋಡಾ
ಅಪ್ರಮಾಣಕೂಡಲಸಂಗಮದೇವಾ.