Index   ವಚನ - 667    Search  
 
ಜಾಗ್ರದಲ್ಲಿಯ ಜಾಗ್ರವಾವುದು? ಪುರುಷನೊಬ್ಬ, ವಾಯು ಹತ್ತು, ನಾಡಿ ನಾಲ್ಕು, ಶಬ್ದಾದಿಗಳೈದು, ವಚನಾದಿಗಳೈದು, ಶ್ರೋತ್ರಾದಿಗಳೈದು, ವಾಗಾದಿಗಳೈದು- ಈ ಮೂವತ್ತೈದು ಕಾರಣಂಗಳೊಡನೆ ಕೂಡಿ ಇವನ ತಬ್ಬಿಕೊಳ್ಳುತ್ತ ಪ್ರಿಯವ ಮಾಡುವದು ಜಾಗ್ರದಲ್ಲಿಯ ಜಾಗ್ರ ನೋಡಾ ಅಪ್ರಮಾಣಕೂಡಲಸಂಗಮದೇವಾ.