Index   ವಚನ - 697    Search  
 
ಮತ್ತಂ, ಆ ಪ್ರಣವದ ದರ್ಪಣಾಕಾರದಲ್ಲಿ ಈಶಾನ್ಯಮುಖ ಉತ್ಪತ್ಯವಾಯಿತ್ತು. ಆ ಪ್ರಣವದ ಅರ್ಧಚಂದ್ರಕದಲ್ಲಿ ತತ್ಪುರುಷಮುಖ ಉತ್ಪತ್ಯವಾಯಿತ್ತು. ಆ ಪ್ರಣವದ ಕುಂಡಲಾಕಾರದಲ್ಲಿ ಅಘೋರಮುಖ ಉತ್ಪತ್ಯವಾಯಿತ್ತು. ಆ ಪ್ರಣವದ ದಂಡಸ್ವರೂಪದಲ್ಲಿ ವಾಮದೇವಮುಖ ಉತ್ಪತ್ಯವಾಯಿತ್ತು. ಆ ಪ್ರಣವದ ತಾರಕಸ್ವರೂಪದಲ್ಲಿ ಸದ್ಯೋಜಾತಮುಖ ಉತ್ಪತ್ಯವಾಯಿತ್ತು ನೋಡಾ. ಇದಕ್ಕೆ ಮಹಾವಾತುಲಾಗಮೇ: ಓಂಕಾರ ತಾರಕಾರೂಪೇ ಸದ್ಯೋಜಾತಂ ಚ ಜಾಯತೇ | ಓಂಕಾರ ದಂಡರೂಪೇ ಚ ವಾಮದೇವಂ ಚ ಜಾಯತೇ || ಓಂಕಾರ ಕುಂಡಲಾಕಾರೇ ಅಘೋರಂ ಚಾಪಿ ಜಾಯತೇ | ಓಂಕಾರ ಅರ್ಧಚಂದ್ರೇ ಚ ತತ್ಪುರುಷಂ ಚ ಜಾಯತೇ || ಓಂಕಾರ ದರ್ಪಣಾಕಾರೇ ಈಶಾನಂ ಚ ಜಾಯತೇ | ಇತಿ ಪಂಚಮುಖಂ ದೇವೀ ಸ್ಥಾನಸ್ಥಾನೇಷು ಜಾಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.