ಆಕಾಶ ಚೈತನ್ಯ ಭಾವ ಕರ್ತ ಕ್ಷೇತ್ರಜ್ಞ ಶಿವನು- ಈ ಆರು ತತ್ತ್ವಂಗಳು
ಆ ಅಖಂಡ ಮಹಾಜ್ಯೋತಿಪ್ರಣವದ ಜ್ಯೋತಿಸ್ವರೂಪವಾಗಿಹ
ಪರಬ್ರಹ್ಮದಲ್ಲಿ ಅಡಗಿತ್ತು ನೋಡಾ.
ಇದಕ್ಕೆ ಮಹಾವಾತುಲಾಗಮೇ:
ಶಿವಕ್ಷೇತ್ರಜ್ಞಕರ್ತಾರಂ ಭಾವಂ ಚೈತನ್ಯಮಂತರಂ |
ಏವಂತು ಷಡ್ವಿಧಂ ಪ್ರೋಕ್ತಂ ಪರಬ್ರಹ್ಮಣಿಲೀಯತೇ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Ākāśa caitan'ya bhāva karta kṣētrajña śivanu- ī āru tattvaṅgaḷu
ā akhaṇḍa mahājyōtipraṇavada jyōtisvarūpavāgiha
parabrahmadalli aḍagittu nōḍā.
Idakke mahāvātulāgamē:
Śivakṣētrajñakartāraṁ bhāvaṁ caitan'yamantaraṁ |
ēvantu ṣaḍvidhaṁ prōktaṁ parabrahmaṇilīyatē ||''
intendudāgi, apramāṇakūḍalasaṅgamadēvā.