ಪಾಣಿ ತ್ವಕ್ಕು ಮನ ಸ್ಪರ್ಶ ವಾಯು ಈಶ್ವರನು
ಈ ಆರು ತತ್ತ್ವಂಗಳು
ಅಖಂಡ ಮಹಾಜ್ಯೋತಿಪ್ರಣವದ ಅರ್ಧಚಂದ್ರಕಸ್ವರೂಪವಾಗಿಹ
ಆನಂದಬ್ರಹ್ಮದಲ್ಲಿ ಅಡಗಿತ್ತು ನೋಡಾ.
ಇದಕ್ಕೆ ಮಹಾವಾತುಲಾಗಮೇ:
ಈಶ್ವರೋ ವಾಯು ಸ್ಪರ್ಶ ಮನ ಸ್ತ್ವತ್ ಪಾಣಿರುಚ್ಯತೇ |
ಷಡ್ ಸಂಮಿಶ್ರಿತಂ ಯಸ್ತು ಬ್ರಹ್ಮಾನಂದೇ ವಿಲೀಯತೇ ||''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Pāṇi tvakku mana sparśa vāyu īśvaranu
ī āru tattvaṅgaḷu
akhaṇḍa mahājyōtipraṇavada ardhacandrakasvarūpavāgiha
ānandabrahmadalli aḍagittu nōḍā.
Idakke mahāvātulāgamē:
Īśvarō vāyu sparśa mana stvat pāṇirucyatē |
ṣaḍ sammiśritaṁ yastu brahmānandē vilīyatē ||''
intendudāgi,
apramāṇakūḍalasaṅgamadēvā.