Index   ವಚನ - 751    Search  
 
ಇನ್ನು ಷಡ್ವಿಧಮುಖಂಗಳ ನಿವೃತ್ತಿ ಅದೆಂತೆಂದಡೆ: ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ ತಾರಕಸ್ವರೂಪದಲ್ಲಿ ಸದ್ಯೋಜಾತಮುಖವಡಗಿತ್ತು ಆ ಪ್ರಣವದ ದಂಡಕಸ್ವರೂಪದಲ್ಲಿ ವಾಮದೇವಮುಖವಡಗಿತ್ತು. ಆ ಪ್ರಣವದ ಕುಂಡಲಾಕಾರದಲ್ಲಿ ಅಘೋರಮುಖವಡಗಿತ್ತು. ಆ ಪ್ರಣವದ ಅರ್ಧಚಂದ್ರಕದಲ್ಲಿ ತತ್ಪುರುಷಮುಖವಡಗಿತ್ತು. ಆ ಪ್ರಣವದ ದರ್ಪಣಾಕಾರದಲ್ಲಿ ಈಶಾನಮುಖವಡಗಿತ್ತು. ಆ ಪ್ರಣವದ ಜ್ಯೋತಿಸ್ವರೂಪದಲ್ಲಿ ನಿರ್ಭಾವಮುಖವಡಗಿತ್ತು ನೋಡಾ. ಇದಕ್ಕೆ ಚತ್ಪಿಂಡಾಗಮೇ: ಓಂಕಾರ ತಾರಕರೂಪೇ ಸದ್ಯೋಜಾತಶ್ಚ ಲೀಯತೇ | ಓಂಕಾರ ದಂಡರೂಪೇ ಚ ವಾಮದೇವ ವಕ್ತ್ರಂಚ ಲೀಯತೇ || ಓಂಕಾರ ಕುಂಡಲಾಕಾರೇ ಅಘೋರವಕ್ತ್ರಂಚ ಲೀಯತೇ | ಓಂಕಾರ ಅರ್ಧಚಂದ್ರೇ ಚ ತತ್ಪುರುಷಶ್ಚ ಲೀಯತೇ || ಓಂಕಾರ ದರ್ಪಣಾಕಾರೇ ಈಶಾನಶ್ಚ ವಿಲೀಯತೇ | ಓಂಕಾರ ಜ್ಯೋತಿರೂಪೇ ಚ ನಿರ್ಭಾವಃ ತತ್ರ ಲೀಯತೇ | ಇತಿ ಷಷ್ಠಮುಖಂ ದೇವಿ ಸ್ಥಾನಸ್ಥಾನೇ ವಿಲೀಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.