ಹೊನ್ನ ಬಿಟ್ಟಡೆ ಹಿರಿಯರೆಂಬೆನೆ?
ಅಲ್ಲಲ್ಲ ನೋಡಾ.
ಹೆಣ್ಣ ಬಿಟ್ಟಡೆ ಹಿರಿಯರೆಂಬೆನೆ?
ಅಲ್ಲಲ್ಲ ನೋಡಾ.
ಮಣ್ಣ ಬಿಟ್ಟಡೆ ಹಿರಿಯರೆಂಬೆನೆ?
ಅಲ್ಲಲ್ಲ ನೋಡಾ.
ಈ ತ್ರಿವಿಧವು ಒಂದಬಿಟ್ಟೊಂದಿರದಾಗಿ,
ಈ ತ್ರಿವಿಧವನತಿಗಳೆದು ಮಹಾಘನದಲ್ಲಿ
ಮನ ಲೀಯವಾಗಿ ಸುಳಿವ ನಿಜಸುಳಿವಿಂಗೆ
ನಮೋ ನಮೋ ಎಂಬೆ ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Honna biṭṭaḍe hiriyarembene?
Allalla nōḍā.
Heṇṇa biṭṭaḍe hiriyarembene?
Allalla nōḍā.
Maṇṇa biṭṭaḍe hiriyarembene?
Allalla nōḍā.
Ī trividhavu ondabiṭṭondiradāgi,
ī trividhavanatigaḷedu mahāghanadalli
mana līyavāgi suḷiva nijasuḷiviṅge
namō namō embe nōḍā
apramāṇakūḍalasaṅgamadēvā.