Index   ವಚನ - 789    Search  
 
ಆಣವ ಮಾಯಾ ಕಾರ್ಮಿಕವೆಂಬ ಮಲತ್ರಯಂಗಳ ಹೊದ್ದದೆ ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧದಾಸೆಯಂ ಬಿಟ್ಟು, ಜಾಗ್ರ ಸ್ವಪ್ನ ಸುಷುಪ್ತಿಯೆಂಬ ಮೂರವಸ್ಥೆಯಂ ಗೆಲಿದು, ತೂರ್ಯವನೊಡಗೂಡಿ ತೂರ್ಯಾತೀತನಾಗಿ ಆ ತೂರ್ಯಾತೀತಕ್ಕತ್ತತ್ತ ವ್ಯೋಮಾತೀತವಾಗಿಹಾತನೆ ಗುರು, ಆತನೆ ಲಿಂಗ, ಆತನೆ ಜಂಗಮ, ಆತನೆ ಶರಣ, ಆತನೆ ನಿತ್ಯನಿರಂಜನ ನಿರಾಮಯ, ನಿರಾಮಯಾತೀತನು, ಆತನೆ ನಮ್ಮ ಅಪ್ರಮಾಣಕೂಡಲಸಂಗಮದೇವ.