Index   ವಚನ - 792    Search  
 
ಈ ವಚನಾನುಭಾವದಲುಳ್ಳರ್ಥವು ಸಕಲ ವೇದಾಗಮ ಶಾಸ್ತ್ರ ಪುರಾಣಂಗಳಲ್ಲಿಯುಂಟು ನೋಡಾ. ಈ ವಚನಾನುಭಾವದಲ್ಲಿಲ್ಲದರ್ಥವು ಸಕಲ ವೇದಾಗಮ ಶಾಸ್ತ್ರ ಪುರಾಣಂಗಳಲ್ಲಿಯೂ ಇಲ್ಲ ನೋಡಾ. ಈ ವಚನಾನುಭಾವದ ಅರ್ಥವು ಸಕಲ ವೇದಾಗಮ ಶಾಸ್ತ್ರ ಪುರಾಣಂಗಳಿಗೂ ನಿಲುಕದು ನೋಡಾ. ಈ ವಚನಾನುಭಾವದ ಅರ್ಥವು ಸಕಲ ವೇದಾಗಮ ಶಾಸ್ತ್ರ ಪುರಾಣಾತೀತವು ನೋಡಾ ಅಪ್ರಮಾಣಕೂಡಲಸಂಗಮದೇವಾ.