ಊರ್ಧ್ವಮುಖ ಅಧೋಮುಖ ಸಮಾದಿಷ್ಟಿಯೆಂದು
ಅಂತರಂಗದಲ್ಲಿ ತ್ರಿವಿಧಮುಖಂಗಳುಂಟು.
ಅದೆಂತೆಂದಡೆ:
ಊರ್ಧ್ವಮುಖ ಹದಿನಾರು ಮುಖವಾಗಿಹುದು.
ಅಧೋಮುಖ ಮೂವತ್ತೆರಡು ಮುಖವಾಗಿಹುದು.
ಸಮಾದಿಷ್ಟಿ ಅರುವತ್ತುನಾಲ್ಕು ಮುಖವಾಗಿಹುದು.
ಈ ತ್ರಿವಿಧ ಮುಖವನರಿದು ಅರ್ಚಿಸಿ,
ಸಚ್ಚಿದಾನಂದವೆಂಬ ದ್ರವ್ಯವ ತ್ರಿವಿಧಮುಖದಲ್ಲಿ ಅರ್ಪಿಸಬಲ್ಲಾತ
ತ್ರಿವಿಧಪ್ರಸಾದಿ, ತ್ರಿವಿಧಪರಿಣಾಮಿ, ತ್ರಿವಿಧಐಕ್ಯ ತಾನಾದ ಶರಣ ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Ūrdhvamukha adhōmukha samādiṣṭiyendu
antaraṅgadalli trividhamukhaṅgaḷuṇṭu.
Adentendaḍe:
Ūrdhvamukha hadināru mukhavāgihudu.
Adhōmukha mūvatteraḍu mukhavāgihudu.
Samādiṣṭi aruvattunālku mukhavāgihudu.
Ī trividha mukhavanaridu arcisi,
saccidānandavemba dravyava trividhamukhadalli arpisaballāta
trividhaprasādi, trividhapariṇāmi, trividha'aikya tānāda śaraṇa nōḍā
apramāṇakūḍalasaṅgamadēvā.