Index   ವಚನ - 863    Search  
 
ಕಣ್ಣಿಲ್ಲದೆ ನೋಡಿ ಕಾಮಿಸುವ ಶರಣ. ಕಾಲಿಲ್ಲದೆ ಗಮಿಸಿ ಸುಳಿದಾಡುವ ಶರಣ. ಕೈಯಿಲ್ಲದೆ ಸೋಂಕಿ ಪರಿಣಾಮಿಸುವ ಶರಣ. ಬಾಯಿಲ್ಲದೆ ರುಚಿಸುವ ನೋಡಾ ಶರಣನು ಅಪ್ರಮಾಣಕೂಡಲಸಂಗಮದೇವಾ.