Index   ವಚನ - 871    Search  
 
ಮೇರುಗಿರಿಶಿಖರ ಪಶ್ಚಿಮದ್ವಾರದಮಧ್ಯದಲ್ಲಿ ನಿರಾಳವೆಂಬ ಮಹಾಗಿರಿಯೊಂದು ನೋಡಾ. ಆ ಮಹಾಗಿರಿಯ ಶಿಖರದ ತುದಿಯಲ್ಲಿ ನಿರಂಜನವೆಂಬ ಕದಳಿಯುಂಟು ನೋಡಾ. ಆ ಕದಳಿಯ ಒಳಹೊಕ್ಕು ನೋಡಲು ನಿರಂಜನಾತೀತವೆಂಬ ಲಿಂಗವ ಕಂಡು, ಸ್ವಯಲಿಂಗಿಯಾದೆನು ನೋಡಾ ಅಪ್ರಮಾಣಕೂಡಲಸಂಗಮದೇವಾ.