Index   ವಚನ - 879    Search  
 
ತಾನೊಂದು ಕಾಲದಲ್ಲಿ ಬಿಂದುವಿನೊಳಗೆ ಬಿಂದುವಾದನು. ತಾನೊಂದು ಕಾಲದಲ್ಲಿ ಬಿಂದುವಿನೊಳಗೆ ನಾದವಾದನು. ತಾನೊಂದು ಕಾಲದಲ್ಲಿ ಬಿಂದುವಿನೊಳಗೆ ಕಲೆಯಾದನು. ತಾನೊಂದು ಕಾಲದಲ್ಲಿ ಬಿಂದುವಿನೊಳಗೆ ಬಿಂದ್ವಾತೀತನಾದನು ನೋಡಾ ನಮ್ಮ ಅಪ್ರಮಾಣಕೂಡಲಸಂಗಮದೇವ