Index   ವಚನ - 885    Search  
 
ಪರಧನ ಪರಸ್ತ್ರೀ ಪರಾನ್ನದಾಸೆಯ ಬಿಡದೆ, ನಿಂದೆ ಸ್ತುತಿಗಳೆರಡು ಸಮವಾಗದೆ, ಮಾಗಿಯ ಕೋಗಿಲೆಯಂತೆ ಮೂಗನಾಗಿರಲರಿಯದೆ, ಬಯಲಬ್ರಹ್ಮವ ನುಡಿವ ತರ್ಕಿಗಳ ಕೂಡೆ ತರ್ಕವ ಮಾಡಿ, ಶರಣನೆಂದು ಸುಳಿದಡೆ ಪಂಚಮಹಾಪಾತಕ ನೋಡಾ ಅಪ್ರಮಾಣಕೂಡಲಸಂಗಮದೇವಾ.