ನಿರಂಜನಪ್ರಣವ ಅವಾಚ್ಯಪ್ರಣವ ಉತ್ಪತ್ಯವಾಗದತ್ತತ್ತ,
ಕಲಾಪ್ರಣವ ಅನಾದಿಪ್ರಣವ ಉತ್ಪತ್ಯವಾಗದತ್ತತ್ತ,
ಅಕಾರ ಉಕಾರ ಮಕಾರವೆಂಬ ಬೀಜ ಉತ್ಪತ್ಯವಾಗದತ್ತತ್ತ,
ನಾದ ಬಿಂದು ಕಳೆ ಉತ್ಪತ್ಯವಾಗದತ್ತತ್ತ,
ಪ್ರಕೃತಿ ಪ್ರಾಣ ಓಂಕಾರ ಉತ್ಪತ್ಯವಾಗದತ್ತತ್ತ,
ಲೋಕಾದಿಲೋಕಂಗಳೇನೂ ಉತ್ಪತ್ಯವಾಗದತ್ತತ್ತ,
ನಿರಂಜನಪ್ರಣವಾತೀತನಾಗಿದ್ದನಯ್ಯ ಇಲ್ಲದಂತೆ,
ನಮ್ಮ ಅಪ್ರಮಾಣಕೂಡಲಸಂಗಮದೇವನು.
Art
Manuscript
Music
Courtesy:
Transliteration
Niran̄janapraṇava avācyapraṇava utpatyavāgadattatta,
kalāpraṇava anādipraṇava utpatyavāgadattatta,
akāra ukāra makāravemba bīja utpatyavāgadattatta,
nāda bindu kaḷe utpatyavāgadattatta,
prakr̥ti prāṇa ōṅkāra utpatyavāgadattatta,
lōkādilōkaṅgaḷēnū utpatyavāgadattatta,
niran̄janapraṇavātītanāgiddanayya illadante,
nam'ma apramāṇakūḍalasaṅgamadēvanu.