ನಿರಂಜನಪ್ರಣವದ ನೆನಹುಮಾತ್ರದಿಂದ
ಅವಾಚ್ಯಪ್ರಣವ ಉತ್ಪತ್ಯವಾಯಿತ್ತು.
ಇನ್ನು ಅವಾಚ್ಯಪ್ರಣವದ ನಿರ್ದೇಶಸ್ಥಲದ ವಚನವೆಂತೆಂದಡೆ:
ನಿರಾಳಶಾಂತ್ಯತೀತೋತ್ತರಕಲೆ,
ನಿರಾಳ ಶಾಂತ್ಯತೀತ ಕಲೆಗಳಿಲ್ಲದಂದು,
ನಿರಾಳಶಾಂತಿಕಲೆ ನಿರಾಳವಿದ್ಯಾಕಲೆಗಳಿಲ್ಲದಂದು,
ನಿರಾಳಪ್ರತಿಷ್ಠಾಕಲೆ ನಿರಾಳನಿವೃತ್ತಿಕಲೆಗಳಿಲ್ಲದಂದು,
ನಿರಾಳಮಹಾಸಾದಾಖ್ಯ ನಿರಾಳಮೂರ್ತಿಸಾದಾಖ್ಯವಿಲ್ಲದಂದು,
ನಿರಾಳಕರ್ತೃಸಾದಾಖ್ಯ ನಿರಾಳಕರ್ಮಸಾದಾಖ್ಯವಿಲ್ಲದಂದು,
ಅವಾಚ್ಯ ಪ್ರಣವವಾಗಿದ್ದನು ನೋಡಾ ಇಲ್ಲದಂತೆ,
ನಮ್ಮ ಅಪ್ರಮಾಣಕೂಡಲಸಂಗಮದೇವನು.
Art
Manuscript
Music
Courtesy:
Transliteration
Niran̄janapraṇavada nenahumātradinda
avācyapraṇava utpatyavāyittu.
Innu avācyapraṇavada nirdēśasthalada vacanaventendaḍe:
Nirāḷaśāntyatītōttarakale,
nirāḷa śāntyatīta kalegaḷilladandu,
nirāḷaśāntikale nirāḷavidyākalegaḷilladandu,
nirāḷapratiṣṭhākale nirāḷanivr̥ttikalegaḷilladandu,
nirāḷamahāsādākhya nirāḷamūrtisādākhyavilladandu,
nirāḷakartr̥sādākhya nirāḷakarmasādākhyavilladandu,
avācya praṇavavāgiddanu nōḍā illadante,
nam'ma apramāṇakūḍalasaṅgamadēvanu.