Index   ವಚನ - 906    Search  
 
ಇನ್ನು ಅಂತರಾತ್ಮ ಪರಮಾತ್ಮನ ನಿವೃತ್ತಿ ಅದೆಂತೆಂದಡೆ: ಅಂತರಾತ್ಮನೆಂಬ ಮಹಾಗುರು ಪರಮಾತ್ಮನೆಂಬ ಮಹಾಲಿಂಗದಲ್ಲಿ ಅಡಗಿತ್ತು. ಆ ಪರಮಾತ್ಮನೆಂಬ ಮಹಾಲಿಂಗವು ಸರ್ವಾತ್ಮನೆಂಬ ಮಹಾಜಂಗಮದಲ್ಲಿ ಅಡಗಿತ್ತು. ಆ ಸರ್ವಾತ್ಮನೆಂಬ ಮಹಾಜಂಗಮ ತಾನೆ ನಿತ್ಯ ನಿರಂಜನ ನಿರಾಮಯ ನಿರಾಮಯಾತೀತನಾಗಿದ್ದನು ನೋಡಾ, ಅಪ್ರಮಾಣಕೂಡಲಸಂಗಮದೇವಾ.