ಶ್ರೀ ಮನ್ನಿರಾಳ ನಿರಾಲಂಬ ನಿರಂಜನ
ನಿರಾಮಯ ನಿರಾಮಯಾತೀತ
ಪರಮ ಪರಮಾನಂದ ಪರಮಾರ್ಥ
ಪರಮೇಶ ಪರಾತ್ಪರ
ಪರಬ್ರಹ್ಮನನುಪಮತೇಜೋಮಯ
ಅಗಣಿತ ಅಗೋಚರ
ಅಪ್ರಮೇಯ ಅಖಂಡಪರಿಪೂರ್ಣಚೈತನ್ಯವಪ್ಪ
ಸಕಲನಿಃಕಲಾತೀತವಾಗಿಪ್ಪ
ಅಖಂಡ ಜ್ಯೋತಿರ್ಮಯಲಿಂಗ
ತಾನೆ ತನ್ನ ಲೀಲಾವಿನೋದಕ್ಕೆ
ಅಪ್ರಮಾಣ ಕೂಡಲಸಂಗಯ್ಯನಾಗಿ ಬಿಜಯಂಗೆಯ್ದು
ಅಂತರಂಗ ಬಹಿರಂಗ ಸರ್ವಾಂಗವೆಲ್ಲವನಿಂಬುಗೊಂಡು
ಸ್ಥೂಲ ಸೂಕ್ಷ್ಮಕಾರಣ ನುಡಿ
ಚೈತನ್ಯವೆಲ್ಲ ತಾನೆ ಯಂತ್ರವಾಹಕನಾಗಿ ಆಡಿಸುತ್ತಿರ್ದನು ನೋಡಾ
ನಮ್ಮ ಅಪ್ರಮಾಣ ಕೂಡಲಸಂಗಮದೇವನು.
Art
Manuscript
Music
Courtesy:
Transliteration
Śrī mannirāḷa nirālamba niran̄jana
nirāmaya nirāmayātīta
parama paramānanda paramārtha
paramēśa parātpara
parabrahmananupamatējōmaya
agaṇita agōcara
apramēya akhaṇḍaparipūrṇacaitan'yavappa
sakalaniḥkalātītavāgippa
akhaṇḍa jyōtirmayaliṅga
tāne tanna līlāvinōdakke
apramāṇa kūḍalasaṅgayyanāgi bijayaṅgeydu
antaraṅga bahiraṅga sarvāṅgavellavanimbugoṇḍu
sthūla sūkṣmakāraṇa nuḍi
caitan'yavella tāne yantravāhakanāgi āḍisuttirdanu nōḍā
nam'ma apramāṇa kūḍalasaṅgamadēvanu.