ಅಂಥ ಬ್ರಹ್ಮಾಂಡವ ಮೂರುಸಾವಿರದ ಇಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಅನಂತನೆಂಬ ಭುವನ.
ಆ ಭುವನದೊಳು ಕಾಲರುದ್ರನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಹದಿನೈದುಕೋಟಿ ನಾರಾಯಣ ಬ್ರಹ್ಮ ರುದ್ರರು,
ಹದಿನೈದುಕೋಟಿ ವೇದಪುರುಷರು,
ಮುನೀಂದ್ರರು, ಇಂದ್ರಚಂದ್ರಾದಿತ್ಯರು,
ಮೂವತ್ತಾರುಕೋಟಿ ದೇವರ್ಕಳಿಹರು ನೋಡಾ
ಅಪ್ರಮಾಣ ಕೂಡಲಸಂಗಮವೇವಾ.
Art
Manuscript
Music
Courtesy:
Transliteration
Antha brahmāṇḍava mūrusāvirada ippatteṇṭu
brahmāṇḍavanoḷakoṇḍudondu anantanemba bhuvana.
Ā bhuvanadoḷu kālarudranemba mahārudramūrti ihanu.
Ā rudramūrtiya ōlagadalli
hadinaidukōṭi nārāyaṇa brahma rudraru,
hadinaidukōṭi vēdapuruṣaru,
munīndraru, indracandrādityaru,
mūvattārukōṭi dēvarkaḷiharu nōḍā
apramāṇa kūḍalasaṅgamavēvā.