Index   ವಚನ - 6    Search  
 
ಅಂಥ ಬ್ರಹ್ಮಾಂಡವ ನಾಲ್ಕುಸಾವಿರದ ಮೂವತ್ತೆಂಟುಕೋಟಿ ಬ್ರಹ್ಮಾಂಡವನೊಳಕೊಂಡುದೊಂದು ವ್ಯೋಮರೂಪನೆಂಬ ಭುವನ. ಆ ಭುವನದೊಳು ಪ್ರಳಯಕಾಲನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಇಪ್ಪತ್ತುಕೋಟಿ ರುಂದ್ರ ಬ್ರಹ್ಮ ನಾರಾಯಣರು, ಇಪ್ಪತ್ತುಕೋಟಿ ಇಂದ್ರ ಚಂದ್ರಾದಿತ್ಯರು ವೇದಪುರುಷರು, ಮುನೀಂದ್ರರು, ಮೂವತ್ತೇಳುಕೋಟಿ ದೇವರ್ಕಳಿಹರು ನೋಡಾ ಅಪ್ರಮಾಣ ಕೂಡಲಸಂಗಮದೇವಾ.