Index   ವಚನ - 16    Search  
 
ಅಂಥ ಬ್ರಹ್ಮಾಂಡವ ಹದಿನಾಲ್ಕುಸಾವಿರದ ನೂರಾಮೂವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ನಿವೃತ್ತಿಯೆಂಬ ಭುವನ. ಆ ಭುವನದೊಳು ಪಾದಲೋಚನನೆಂಬ ಮಹಾರುದ್ರಮೂರ್ತಿ ಇಹನು. ಆ ರುದ್ರ ಮೂರ್ತಿಯ ಓಲಗದಲ್ಲಿ ಎಪ್ಪತ್ತುಕೋಟಿ ಬ್ರಹ್ಮ ನಾರಾಯಣ ರುದ್ರರು, ಎಪ್ಪತ್ತುಕೋಟಿ ಇಂದ್ರಚಂದ್ರಾದಿತ್ಯರು, ಎಪ್ಪತ್ತುಕೋಟಿ ವೇದಪುರುಷರು ಮುನೀಂದ್ರರು ನಾಲ್ವತ್ತೇಳುಕೋಟಿ ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.