ಅಂಥ ಬ್ರಹ್ಮಾಂಡವ ಇಪ್ಪತ್ತೆಂಟುಸಾವಿರದ ಇನ್ನೂರಾ ಎಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಶ್ರೀಕಂಠವೆಂಬ ಭುವನ.
ಆ ಭುವನದೊಳು ಶ್ರೀಮಹಾದೇವನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನೂರಾನಾಲ್ವತ್ತುಕೋಟಿ ರುದ್ರ ಬ್ರಹ್ಮ ನಾರಾಯಣರು,
ನೂರಾನಾಲ್ವತ್ತುಕೋಟಿ ಇಂದ್ರಚಂದ್ರಾದಿತ್ಯರು, ವೇದಪುರುಷರು,
ಮುನೀಂದ್ರರು, ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Antha brahmāṇḍava ippatteṇṭusāvirada innūrā eppatteṇṭu
brahmāṇḍavanoḷakoṇḍudondu śrīkaṇṭhavemba bhuvana.
Ā bhuvanadoḷu śrīmahādēvanemba rudramūrti ihanu.
Ā rudramūrtiya ōlagadalli
nūrānālvattukōṭi rudra brahma nārāyaṇaru,
nūrānālvattukōṭi indracandrādityaru, vēdapuruṣaru,
munīndraru, dēvarkaḷiharu nōḍā
apramāṇakūḍalasaṅgamadēvā.