Index   ವಚನ - 32    Search  
 
ಅಂಥ ಬ್ರಹ್ಮಾಂಡವ ಮೂವತ್ತುಸಾವಿರ ಇನ್ನೂರತೊಂಬತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ವಾಮಜೇಷ್ಠವೆಂಬ ಭುವನ. ಆ ಭುವನದೊಳು ವಾಮದೇವನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ನೂರಾಐವತ್ತುಕೋಟಿ ರುದ್ರ ಬ್ರಹ್ಮ ನಾರಾಯಣರು, ಇಂದ್ರಚಂದ್ರಾದಿತ್ಯರು, ನೂರಾನಾಲ್ವತ್ತುಕೋಟಿ, ವೇದಪುರುಷರು,ಮುನೀಂದ್ರರು, ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.