Index   ವಚನ - 40    Search  
 
ಅಂಥ ಬ್ರಹ್ಮಾಂಡವ ಮೂವತ್ತೆಂಟುಸಾವಿರದ ಮುನ್ನೂರಾ ಎಪ್ಪತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಅಂಗುಷ್ಠಮಾತ್ರಭುವನಿಯೆಂಬ ಭುವನ. ಆ ಭುವನದೊಳು ಅಖಂತನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ನೂರಾತೊಂಬತ್ತುಕೋಟಿ ದೇವರ್ಕಳು, ಇಂದ್ರಚಂದ್ರಾದಿತ್ಯರು, ವೇದಪುರುಷರು, ಮುನೀಂದ್ರರು, ನೂರಾತೊಂಬತ್ತುಕೋಟಿ ರುದ್ರ ಬ್ರಹ್ಮ ನಾರಾಯಣರಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.