Index   ವಚನ - 55    Search  
 
ಅಂಥ ಬ್ರಹ್ಮಾಂಡವ ಐವತ್ತುಮೂರುಸಾವಿರದ ಐನೂರ ಇಪ್ಪತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಚಂಡವೆಂಬ ಭುವನ. ಆ ಭುವನದೊಳು ಭವದೂರನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಇನ್ನೂರಾ ಅರವತ್ತೈದುಕೋಟಿ ಇಂದ್ರಚಂದ್ರಾದಿತ್ಯರಿಹರು ಇನ್ನೂರಾ ಅರವತ್ತೈದುಕೋಟಿ ವೇದಪುರುಷರು ಮುನೀಂದ್ರರಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.