Index   ವಚನ - 56    Search  
 
ಅಂಥ ಬ್ರಹ್ಮಾಂಡವ ಐವತ್ತುನಾಲ್ಕು ಸಾವಿರದ ಐನೂರಾ ಮೂವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಕ್ರೋಧವೆಂಬ ಭುವನ. ಆ ಭುವನದೊಳು ಜ್ಯೋತಿರ್ಮಯನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಇನ್ನೂರಾ ಎಪ್ಪತ್ತುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು. ಇನ್ನೂರಾ ಎಪ್ಪತ್ತುಕೋಟಿ ಇಂದ್ರಚಂದ್ರಾದಿತ್ಯರಿಹರು. ಇನ್ನೂರಾ ಎಪ್ಪತ್ತುಕೋಟಿ ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.