Index   ವಚನ - 59    Search  
 
ಅಂಥ ಬ್ರಹ್ಮಾಂಡವ ಐವತ್ತೇಳುಸಾವಿರದ ಐನೂರಾ ಅರವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಭವ್ಯವೆಂಬ ಭುವನ. ಆ ಭುವನದೊಳು ನೀಲಲೋಹಿತನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಇನ್ನೂರಾ ಎಂಬತ್ತೈದುಕೋಟಿ ಬ್ರಹ್ಮ-ನಾರಾಯಣ-ರುದ್ರರಿಹರು. ಇನ್ನೂರಾ ಎಂಬತ್ತೈದುಕೋಟಿ ಇಂದ್ರಚಂದ್ರಾದಿತ್ಯರಿಹರು. ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.