Index   ವಚನ - 66    Search  
 
ಅಂಥ ಬ್ರಹ್ಮಾಂಡವ ಅರವತ್ತ್ನಾಲ್ಕು ಸಾವಿರದ ಆರುನೂರಾ ಮೂವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಉಗ್ರವೆಂಬ ಭುವನ. ಆ ಭುವನದೊಳು ಲೋಕನಾಥನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಮುನ್ನೂರಾ ಇಪ್ಪತ್ತುಕೋಟಿ ನಾರಾಯಣ ರುದ್ರ ಬ್ರಹ್ಮಾದಿಗಳಿಹರು ನೋಡಾ. ಮುನ್ನೂರಾ ಇಪ್ಪತ್ತುಕೋಟಿ ಇಂದ್ರಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.