ಅಂಥ ಬ್ರಹ್ಮಾಂಡವ ಅರವತ್ತೈದು ಸಾವಿರದ ಆರುನೂರಾ ನಲವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಭೀಮವೆಂಬ ಭುವನ.
ಆ ಭುವನದೊಳು ಭೀಮೇಶ್ವರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಮುನ್ನೂರಾ ಇಪ್ಪತ್ತೈದು ಕೋಟಿ ರುದ್ರ-ಬ್ರಹ್ಮ-ನಾರಾಯಣರು,
ಮುನ್ನೂರಾ ಇಪ್ಪತ್ತೈದುಕೋಟಿ ಇಂದ್ರಚಂದ್ರಾದಿತ್ಯರಿಹರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Antha brahmāṇḍava aravattaidu sāvirada ārunūrā nalavatteṇṭu
brahmāṇḍavanoḷakoṇḍudondu bhīmavemba bhuvana.
Ā bhuvanadoḷu bhīmēśvaranemba rudramūrti ihanu.
Ā rudramūrtiya ōlagadalli
munnūrā ippattaidu kōṭi rudra-brahma-nārāyaṇaru,
munnūrā ippattaidukōṭi indracandrādityariharu
vēdapuruṣaru munīndraru dēvarkaḷiharu nōḍā
apramāṇakūḍalasaṅgamadēvā.