Index   ವಚನ - 71    Search  
 
ಅಂಥ ಬ್ರಹ್ಮಾಂಡವ ಅರವತ್ತೊಂಬತ್ತು ಸಾವಿರದ ಆರುನೂರಾ ಎಂಬತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಬ್ರಾಹ್ಮಣವೆಂಬ ಭುವನ. ಆ ಭುವನದೊಳು ಬ್ರಹ್ಮಾಧಿಪತಿಯೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಮುನ್ನೂರಾ ನಲವತ್ತೈದುಕೋಟಿ ದೇವರ್ಕಳು ವೇದಪುರುಷರು ಮುನೀಂದ್ರರು ಇಂದ್ರಚಂದ್ರಾದಿತ್ಯರು ಇಹರು ನೋಡಾ. ಮೂನ್ನೂರಾ ನಲವತ್ತೈದುಕೋಟಿ ನಾರಾಯಣರು-ಬ್ರಹ್ಮ-ರುದ್ರಾದಿಗಳಿಹರು ನೋಡಾ. ಅಪ್ರಮಾಣಕೂಡಲಸಂಗಮದೇವಾ.