Index   ವಚನ - 77    Search  
 
ಅಂಥ ಬ್ರಹ್ಮಾಂಡವ ಎಪ್ಪತ್ತೈದುಸಾವಿರದ ಏಳುನೂರಾ ನಲವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಸೌಮ್ಯವೆಂಬ ಭುವನ. ಆ ಭುವನದೊಳು ಉನ್ಮನಿಜ್ಯೋತಿಯೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಮುನ್ನೂರ ಎಪ್ಪತ್ತೈದು ಕೋಟಿ ನಾರಾಯಣ-ರುದ್ರ-ಬ್ರಹ್ಮಾದಿಗಳಿಹರು ನೋಡಾ. ಮುನ್ನೂರಾ ಎಪ್ಪತ್ತೈದು ಕೋಟಿ ಇಂದ್ರ-ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.