Index   ವಚನ - 78    Search  
 
ಅಂಥ ಬ್ರಹ್ಮಾಂಡವ ಎಪ್ಪತ್ತಾರುಸಾವಿರದಾ ಏಳುನೂರಾ ಐವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಇಂದ್ರವೆಂಬ ಭುವನ. ಆ ಭುವನದೊಳು ಇಂದ್ರಾಧಿಪನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಮುನ್ನೂರ ಎಂಬತ್ತುಕೋಟಿ ರುದ್ರ-ನಾರಾಯಣ-ಬ್ರಹ್ಮರಿಹರು. ಮುನ್ನೂರಾ ಎಂಬತ್ತುಕೋಟಿ ಇಂದ್ರಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.