Index   ವಚನ - 79    Search  
 
ಅಂಥ ಬ್ರಹ್ಮಾಂಡವ ಎಪ್ಪತ್ತೇಳು ಸಾವಿರದಾ ಏಳುನೂರಾ ಅರವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಗಾಂಧರ್ವವೆಂಬ ಭುವನ. ಆ ಭುವನದೊಳು ಉಗ್ರನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಮುನ್ನೂರಾ ಎಂಬತ್ತೈದುಕೋಟಿ ವೇದಪುರುಷರು ಮುನೀಂದ್ರರು ದೇವರ್ಕಳು ಇಂದ್ರಚಂದ್ರಾದಿತ್ಯರಿಹರು ನೋಡಾ. ಮುನ್ನೂರ ಎಂಬತ್ತೈದು ಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.