Index   ವಚನ - 85    Search  
 
ಅಂಥ ಬ್ರಹ್ಮಾಂಡವ ಎಂಬತ್ಮೂರುಸಾವಿರದಾ ಎಂಟುನೂರಾ ಇಪ್ಪತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಶಂಖುಕರ್ಣವೆಂಬ ಭುವನ. ಆ ಭುವನದೊಳು ಕಾಲಕಾಲನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ನಾನೂರ ಹದಿನೈದುಕೋಟಿ ನಾರಾಯಣ ಬ್ರಹ್ಮ ರುದ್ರಾದಿಗಳಿಹರು ನೋಡಾ. ನಾನೂರ ಹದಿನೈದುಕೋಟಿ ಇಂದ್ರಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.