Index   ವಚನ - 87    Search  
 
ಅಂಥ ಬ್ರಹ್ಮಾಂಡವ ಎಂಬತ್ತೈದುಸಾವಿರದಾ ಎಂಟುನೂರಾ ನಲವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಮಂಡಲೇಶ್ವರವೆಂಬ ಭುವನ. ಆ ಭುವನದೊಳು ಮಂಡಲಾಧಿಪನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ನಾನೂರಿಪ್ಪತ್ತು ಕೋಟಿ ಬ್ರಹ್ಮ-ನಾರಾಯಣ- ರುದ್ರರಿಹರು ನೋಡಾ. ನಾನೂರಿಪ್ಪತ್ತೈದುಕೋಟಿ ಇಂದ್ರ-ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.