Index   ವಚನ - 88    Search  
 
ಅಂಥ ಬ್ರಹ್ಮಾಂಡವ ಎಂಬತ್ತಾರುಸಾವಿರದ ಎಂಟುನೂರಾ ಐವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಮಾಕೋಟವೆಂಬ ಭುವನ. ಆ ಭುವನದೊಳು ಮಹಾನಂದನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ನಾನೂರಮೂವತ್ತುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು. ನಾನೂರಮೂವತ್ತುಕೋಟಿ ಇಂದ್ರ-ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.