Index   ವಚನ - 95    Search  
 
ಅಂಥ ಬ್ರಹ್ಮಾಂಡವ ತೊಂಬತ್ತು ಮೂರು ಸಾವಿರದ ಒಂಬೈನೂರಾ ಇಪ್ಪತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಮಹಾಲಯವೆಂಬ ಭುವನ. ಆ ಭುವನದೊಳು ಮಹಾಭೈರವನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ನಾನೂರರುವತ್ತೈದುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು ನೋಡಾ. ನಾನೂರರುವತ್ತೈದುಕೋಟಿ ಇಂದ್ರ-ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ. ಅಪ್ರಮಾಣಕೂಡಲಸಂಗಮದೇವಾ.