Index   ವಚನ - 101    Search  
 
ಅಂಥ ಬ್ರಹ್ಮಾಂಡವ ತೊಂಬತ್ತೊಂಬತ್ತುಸಾವಿರದ ಒಂಬೈನೂರಾಎಂಬತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಅಟ್ಟಹಾಸವೆಂಬ ಭುವನ. ಆ ಭುವನದೊಳು ಅಯೋಗನಾಶನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ನಾನೂರತೊಂಬತ್ತೈದುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು ನೋಡಾ, ನಾನೂರತೊಂಬತ್ತೈದುಕೋಟಿ ಇಂದ್ರ-ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.