ಗುರುವಿಂಗೆ ಗುರುವುಳ್ಳನ್ನಕ್ಕ, ಲಿಂಗಕ್ಕೆ ಲಿಂಗವುಳ್ಳನ್ನಕ್ಕ,
ಜಂಗಮಕ್ಕೆ ಜಂಗಮವುಳ್ಳನ್ನಕ್ಕ, ಆತ್ಮಂಗೆ ಅರಿವುಳ್ಳನ್ನಕ್ಕ,
ಅರಿವು ಮರವೆಗೆ ಇದಿರೆಡೆಯುಂಟು.
ಗುರುವಿಂಗೆ ಉಭಯವಿಲ್ಲದೆ, ಲಿಂಗಕ್ಕೆ ಉಭಯವಿಲ್ಲದೆ,
ಜಂಗಮಕ್ಕೆ ಉಭಯವಿಲ್ಲದೆ,
ಆತ್ಮಂಗೆ ಎರಡಳಿದು, ನಿಜ ಏಕವಹನ್ನಬರ
ಒಂದನಹುದು ಒಂದನಲ್ಲಾ ಎಂದು
ಸಂದೇಹಕ್ಕೆ ಒಡಲಾಗಬಾರದು.
ತಾ ನಿಂದ ನಿಂದಲ್ಲಿಯೇ ಸಂದಳಿಯಬೇಕು,
ಬಸವಣ್ಣಪ್ರಿಯ ನಾಗರೇಶ್ವರಲಿಂಗವನರಿಯಬಲ್ಲಡೆ.
Art
Manuscript
Music
Courtesy:
Transliteration
Guruviṅge guruvuḷḷannakka, liṅgakke liṅgavuḷḷannakka,
jaṅgamakke jaṅgamavuḷḷannakka, ātmaṅge arivuḷḷannakka,
arivu maravege idireḍeyuṇṭu.
Guruviṅge ubhayavillade, liṅgakke ubhayavillade,
jaṅgamakke ubhayavillade,
ātmaṅge eraḍaḷidu, nija ēkavahannabara
ondanahudu ondanallā endu
sandēhakke oḍalāgabāradu.
Tā ninda nindalliyē sandaḷiyabēku,
basavaṇṇapriya nāgarēśvaraliṅgavanariyaballaḍe.