Index   ವಚನ - 28    Search  
 
ಎಲ್ಲರೂ ಓದುವುದು ವಚನಂಗಳು; ಎಲ್ಲರೂ ನುಡಿವರು ಬೊಮ್ಮವ. ಎಲ್ಲರೂ ಕೇಳುವುದು ವಚನಂಗಳು; ಹೇಳುವಾತ ಗುರುವಲ್ಲ, ಕೇಳುವಾತ ಶಿಷ್ಯನಲ್ಲ. ಹೇಳಿಹೆ ಕೇಳಿಹೆನೆಂಬನ್ನಕ್ಕರ ವಿರಕ್ತಿಸ್ಥಲಕ್ಕೆ ಭಂಗನೋಡಾ, ಅಮುಗೇಶ್ವರಾ.