ಕುಂಜರನ ಮರಿಯ ಸರಪಳಿಯಲ್ಲಿ ಕಟ್ಟುವರಲ್ಲದೆ,
ಹಂದಿಯ ಮರಿಯ ಸರಪಳಿಯಲ್ಲಿ ಕಟ್ಟುವರೆ ಅಯ್ಯಾ?
ಸಿಂಹದ ಮರಿಯ ಕಂಡಡೆ ಸೋಜಿಗಬಡುವರಲ್ಲದೆ,
ಸಿಂಗಳೀಕನ ಮರಿಯ ಕಂಡಡೆ ಸೋಜಿಗಬಡುವರೆ ಅಯ್ಯಾ?
ಕಸ್ತೂರಿಯಮೃಗವ ಕಂಡಡೆ ಆಶ್ಚರ್ಯಗೊಂಬರಲ್ಲದೆ
ಕತ್ತೆಯಮರಿಯ ಕಂಡಡೆ ಕಣ್ಣಿನಲ್ಲಿ ನೋಡರು ನೋಡಾ.
ಲಿಂಗವನಪ್ಪಿ ಅಗಲದಿಪ್ಪ ಲಿಂಗೈಕ್ಯನ ಕಂಡಡೆ
ಜಗವೆಲ್ಲಾ ಕೊಂಡಾಡುತಿಪ್ಪರು ನೋಡಾ.
ಅಮುಗೇಶ್ವರನೆಂಬ ಲಿಂಗವನರಿಯದ ಅಜ್ಞಾನಿಗಳ ಕಂಡಡೆ
ಕತ್ತೆಯಮರಿಯೆಂದು ಕಣ್ಣುಮುಚ್ಚಿಕೊಂಡಿಪ್ಪರು ನೋಡಾ.
Art
Manuscript
Music
Courtesy:
Transliteration
Kun̄jarana mariya sarapaḷiyalli kaṭṭuvarallade,
handiya mariya sarapaḷiyalli kaṭṭuvare ayyā?
Sinhada mariya kaṇḍaḍe sōjigabaḍuvarallade,
siṅgaḷīkana mariya kaṇḍaḍe sōjigabaḍuvare ayyā?
Kastūriyamr̥gava kaṇḍaḍe āścaryagombarallade
katteyamariya kaṇḍaḍe kaṇṇinalli nōḍaru nōḍā.
Liṅgavanappi agaladippa liṅgaikyana kaṇḍaḍe
jagavellā koṇḍāḍutipparu nōḍā.
Amugēśvaranemba liṅgavanariyada ajñānigaḷa kaṇḍaḍe
katteyamariyendu kaṇṇumuccikoṇḍipparu nōḍā.