Index   ವಚನ - 89    Search  
 
ಮರುಜವಣಿಯ ಕಂಡವಂಗೆ ಮರಣದ ಹಂಗುಂಟೆ? ಪರುಷವುಳ್ಳವಂಗೆ ಪಾಷಾಣದ ಹಂಗುಂಟೆ? ಸರ್ವಾಂಗಲಿಂಗವಾದವಂಗೆ ಅನರ್ಪಿತವುಂಟೆ? ಜ್ಯೋತಿಯ ಬೆಳಗಿನಲ್ಲಿದ್ದವಂಗೆ ಕತ್ತಲೆಯ ಹಂಗುಂಟೆ? ಅಮುಗೇಶ್ವರಲಿಂಗವಾದವಂಗೆ ಲಿಂಗದ ಹಂಗುಂಟೆ?