Index   ವಚನ - 102    Search  
 
ಶರಣನ ಅಂತರಂಗದಲ್ಲಿ ಪ್ರಾಣಲಿಂಗವಾಗಿ, ಬಹಿರಂಗದಲ್ಲಿ ಇಷ್ಟಲಿಂಗವಾಗಿಪ್ಪ ಭೇದವನರಿಯರಲ್ಲಾ ಲೀಲೆಯಾದಡೆ ಉಮಾಪತಿಯಾಗಿಪ್ಪನು, ಲೀಲೆ ತಪ್ಪಲೊಡನೆ ಸ್ವಯಂಭುವೆಯಾಗಿಪ್ಪ. ಶರಣಂಗೆ ಲಿಂಗ ಹೋಯಿತ್ತು ಎಂದು ನುಡಿವವರಿಗೆ ಕುಂಭೀಪಾತಕ ನಾಯಕನರಕ ತಪ್ಪದು. ಲಿಂಗೈಕ್ಯವಾದ ಶರಣನ ಸತ್ತನು ಎಂಬ ಭ್ರಷ್ಟರಿಗೆ ರೌರವನರಕ ತಪ್ಪದು ಕಾಣಾ, ಅಮುಗೇಶ್ವರಲಿಂಗವೆ, ನಿಮ್ಮ ಶರಣರು ಲಿಂಗೈಕ್ಯರು.