Index   ವಚನ - 1    Search  
 
ಶ್ರೀಗುರು ವೀರಸಂಗಮನ ಬಣ್ಣಿಸುವುದೆಂತು ಸಾಧ್ಯವೋ? ಸೂಳೆಯ ಮನೆಯಲ್ಲುಂಡು ದೀಕ್ಷೆಯಗೈದು ಶಿವಶರಣೆಯನ್ನಾಗಿ ಮಾಡಿದ; ಕಾಟುಗನ ಮನೆಯಲ್ಲುಂಡು ಅವನ ಜಂಗಮದಾಸೋಹಿಯಾಗಿ ಮಾಡಿದ; ವೈರಿ ಭಾಸ್ಕರಂಗೆ ಲಿಂಗದೀಕ್ಷೆಯ ನಿತ್ತು ಮೈದುನನನ್ನಾಗಿ ಮಾಡಿಕೊಂಡ; ಮೃತಪಟ್ಟವಂಗೆ ಮರಳಿ ಪ್ರಾಣವ ತ್ತೆತ್ತ ಪರುಷದ ಪುತ್ಥಳಿ ಪತಿತ ಪಾವನಮೂರ್ತಿ ಶ್ರೀಗುರು ವೀರಸಂಗಯ್ಯನ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನು ಬಸವಣ್ಣ.