ಒಮ್ಮೆಗೆ ಸುರಿದು, ಮತ್ತೊಮ್ಮೆಗೆ ಬೇಡದಿಪ್ಪುದೆ ಭರಿತಾರ್ಪಣವೆ ?
ಮುಟ್ಟಿ ಮುಟ್ಟಿ ಅರ್ಪಿಸಲಾರದೆ
ಗುಪ್ಪೆಯಾಗಿ ಸುರಿಯಿಸಿ ಕೊಂಡು ಕೊಂಬುದು
ಇದು ಕೃತ್ಯದ ನೇಮ, ಭರಿತಾರ್ಪಣವೆ ?
ಭರಿತಾರ್ಪಣವಾವುದೆಂದಡೆ :
ಪರಸ್ತ್ರೀ ಒಲಿದು ಬಂದಲ್ಲಿ, ನೇಮಕಲ್ಲದ ದ್ರವ್ಯನೆರೆದು,
ನಿಕ್ಷೇಪ ಕೈಲೆಡೆಯ ಕಡವರ ವಿಶ್ವಾಸಿಸಿದಲ್ಲಿ, ಘಾತಕತನವ ಬಿಟ್ಟು
ಇಂತೀ ಅವಗುಣದಲ್ಲಿ ಮಲಿನನಲ್ಲದೆ ಸ್ವಾನುಭಾವಸಿದ್ಧನಾಗಿ
ಕಾಯಕರ್ಮಕ್ಕೊಳಗಲ್ಲದೆ,
ಜೀವ ನಾನಾ ಜೀವಂಗಳಲ್ಲಿ ಹುಟ್ಟಿ ಹೊಂದದೆ,
ಆತ್ಮನ ವಸ್ತುವಲ್ಲದೆ ಮತ್ತೇನನೂ ಅರಿಯದೆ,
ಪರಿಭ್ರಮವ ಹರಿದುದು ಭರಿತಾರ್ಪಣ.
ಈ ಗುಣ ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗ ಸಂಗ.
Art
Manuscript
Music
Courtesy:
Transliteration
Om'mege suridu, mattom'mege bēḍadippude bharitārpaṇave?
Muṭṭi muṭṭi arpisalārade
guppeyāgi suriyisi koṇḍu kombudu
idu kr̥tyada nēma, bharitārpaṇave?
Bharitārpaṇavāvudendaḍe:
Parastrī olidu bandalli, nēmakallada dravyaneredu,
nikṣēpa kaileḍeya kaḍavara viśvāsisidalli, ghātakatanava biṭṭu
intī avaguṇadalli malinanallade svānubhāvasid'dhanāgi
kāyakarmakkoḷagallade,
jīva nānā jīvaṅgaḷalli huṭṭi hondade,
ātmana vastuvallade mattēnanū ariyade,
paribhramava haridudu bharitārpaṇa.
Ī guṇa cenna cenna kūḍala rāmēśvaraliṅga saṅga.